Karnataka

Saturday, February 4th, 2012
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನರಸಿಂಹರಾಜ ಅಸೆಂಬ್ಲಿ ವತಿಯಿಂದ ಜ.26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ಮುಹಮ್ಮದ್ ಫೈಝಲ್ ಧ್ವಜಾರೋಹಣಗೈದರು. ಜಿಲ್ಲಾ ಕಾರ್ಯದರ್ಶಿ ಮತೀನ್ ಬೇಗ್, ನರಸಿಂಹರಾಜ ಅಸೆಂಬ್ಲಿ ಅಧ್ಯಕ್ಷ ಸಯ್ಯದ್ ಸೈಫುಲ್ಲಾ, ಉಪಾಧ್ಯಕ್ಷ ರಿಯಾಝ್ ಅಹ್ಮದ್, ಪಾಪ್ಯುಲರ್ ಫ್ರಂಟ್ ಉಪಾಧ್ಯಕ್ಷ ಅಮೀನ್ ಸೇಠ್, 55ನೆ ವಾರ್ಡ್ ಸಮಿತಿ ಅಧ್ಯಕ್ಷ ಝಮೀರ್ ಅಹ್ಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Saturday, February 4th, 2012
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮೈಸೂರು ಜಿಲ್ಲಾ ವತಿಯಿಂದ ಜನವರಿ 26ರಂದು ಜಿಲ್ಲಾ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧ್ಯಕ್ಷ ಮುಹಮ್ಮದ್ ಫೈಝಲ್ ಧ್ವಜಾರೋಹಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಫರ್, ಉಪಾಧ್ಯಕ್ಷ ಪಿ.ಎಂ.ಹುಸೈನ್, ಕಾರ್ಯದರ್ಶಿ ಮತೀನ್, ಅಫ್ಝಲ್, ಫಾತಿಮಾ ಬೀ, ಅಕ್ರಮ್ ಶರೀಫ್, ನರಸಿಂಹರಾಜ ಅಸೆಂಬ್ಲಿ ಅಧ್ಯಕ್ಷ ಸೈಫುಲ್ಲಾ, ಚಾಮರಾಜ ಅಸೆಂಬ್ಲಿ ಅಧ್ಯಕ್ಷ ತಬ್ರೇಝ್ ಸೇಠ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Rastha Rokho
Friday, February 3rd, 2012
ಗುಲ್ಬರ್ಗಾ: ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುಲ್ಬರ್ಗಾ ಜಿಲ್ಲಾ ಸಮಿತಿ ವತಿಯಿಂದ ಫೆ.2ರಂದು ಇಲ್ಲಿನ ರಿಂಗ್ ರೋಡ್‌ನಲ್ಲಿರುವ ಹುಮ್ನಾಬಾದ್ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿತು.
ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು. ಈ ಹಿಂದೆಯೂ ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತ್ತು.
Rastha Rokho
Friday, February 3rd, 2012
ಗುಲ್ಬರ್ಗಾ: ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುಲ್ಬರ್ಗಾ ಜಿಲ್ಲಾ ಸಮಿತಿ ವತಿಯಿಂದ ಫೆ.2ರಂದು ಇಲ್ಲಿನ ರಿಂಗ್ ರೋಡ್‌ನಲ್ಲಿರುವ ಹುಮ್ನಾಬಾದ್ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿತು.
ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು. ಈ ಹಿಂದೆಯೂ ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತ್ತು.
Thursday, February 2nd, 2012
ಮೈಸೂರು: ‘ಅಧಿಕಾರದೆಡೆಗೆ ಜನರ ನಡಿಗೆ’ ಎಂಬ ಘೋಷ ಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಳ್ಳಲು ತೀರ್ಮಾನಿಸಿರುವ ರಾಜಕೀಯ ಸಮಾವೇಶಗಳ ಅಂಗವಾಗಿ ಇತ್ತೀಚೆಗೆ ಪಕ್ಷದ ಮೈಸೂರು ಜಿಲ್ಲೆಯ ನರಸಿಂಹರಾಜ ಅಸೆಂಬ್ಲಿ ವತಿಯಿಂದ  ಇಲ್ಲಿನ ಜಬ್ಬಾರ್ ಫಂಕ್ಷನ್ ಹಾಲ್‌ನಲ್ಲಿ ಸ್ನೇಹಕೂಟವೊಂದನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮಾವೇಶದ ಪೋಸ್ಟರ್‌ಅನ್ನು ಬಿಡುಗಡೆಗೊಳಿಸಲಾಯಿತು. ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಪಿ.ಎಂ.ಹುಸೈನ್, ಕಾರ್ಯದರ್ಶಿ ಮತೀನ್ ಬೇಗ್, ಕೋಶಾಧಿಕಾರಿ ಫಜಲುಲ್ಲಾ, ನರಸಿಂಹರಾಜ ಅಸೆಂಬ್ಲಿ ಅಧ್ಯಕ್ಷ ಸಯ್ಯದ್ ಸೈಫುಲ್ಲಾ, ಉಪಾಧ್ಯಕ್ಷ ರಿಯಾಝ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯ ರಹ್ಮತುಲ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Thursday, February 2nd, 2012
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನರಸಿಂಹರಾಜ ಅಸೆಂಬ್ಲಿ ವತಿಯಿಂದ ಇತ್ತೀಚೆಗೆ ಇಲ್ಲಿನ ಅಝೀಝ್ ಸೇಠ್ ರೋಡ್‌ನ ಜಬ್ಬಾರ್ ಫಂಕ್ಷನ್ ಹಾಲ್‌ನಲ್ಲಿ ಮಹಿಳೆಯರಿಗಾಗಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎನ್‌ಡಬ್ಲುಎಫ್ ನಾಯಕಿ ಹಸೀನಾ ಆನಮ್‌ರವರು ‘ಹಮಾರಾ ಭಾರತ್’ (ನಮ್ಮ ಭಾರತ) ಎಂಬ ವಿಷಯದ ಮೇಲೆ ಮಾತನಾಡಿದರು. ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಫಾತಿಮಾ ಬೀ ‘ಮಹಿಳಾ ರಾಜಕೀಯ ಜಾಗೃತಿ ಮತ್ತು ನಮ್ಮ ಪಕ್ಷ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಫಾರೂಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Wednesday, February 1st, 2012
ರಾಮನಗರ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಾಮನಗರ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಚೆನ್ನಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕ್ಯಾಂಪಸ್ ಫ್ರಂಟ್‌ನ ಮಾಜಿ ರಾಷ್ಟ್ರೀಯ ಸಮಿತಿ ಸದಸ್ಯ ಮತೀನುದ್ದೀನ್, ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಮತೀನ್ ಮತ್ತು ಮುಹಮ್ಮದ್ ಅಬ್ರಾರ್ ಪಾಶ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸವನ್ನು ಆಯ್ದುಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿದರು.


Wednesday, February 1st, 2012
ಬಂಟ್ವಾಳ: ನಂದರಬೆಟ್ಟು ಘಟಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಕ್ರೀಡಾಕೂಟ 2012ವು ದಿನಾಂಕ 22-1-2012ರಂದು ಬಿ.ಸಿ.ರೋಡ್‌ನ ನಂದರಬೆಟ್ಟು ಮೈದಾನದಲ್ಲಿ ನಡೆಯಿತು.
Monday, January 30th, 2012
ಮಂಗಳೂರು: ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಜನರಲ್ ಅಸೆಂಬ್ಲಿಯು ಜನವರಿ 28,29 - 2012 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರು ಫ್ರೀಢಂ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆರವರ ಭಾಷಣದೊಂದಿಗೆ ವಾರ್ಷಿಕ ಸಭೆಯು ಆರಂಭವಾಯಿತು. ಜನರಲ್ ಅಸೆಂಬ್ಲಿಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1.ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ದೇಶದ ಭದ್ರತೆಗೆ ಸಂಚಕಾರ:
ಬೆಂಗಳೂರಿನಲ್ಲಿ  ಇಸ್ರೇಲ್ ರಾಯಭಾರ ಕಚೇರಿಯನ್ನು ತೆರೆಯುವ ಕೇಂದ್ರ ಸರಕಾರದ ನಿರ್ಧಾರವು ದೇಶದಲ್ಲಿ ನೀತಿಯನ್ನು ರೂಪಿಸುವುದರಲ್ಲಿ  ಹೆಚ್ಚುತ್ತಿರುವ ಝಿಯೋನಿಸ್ಟ್  ರಾಷ್ಟ್ರದ ಪ್ರಭಾವಕ್ಕೆ ಪುರಾವೆಯಾಗಿದೆ.
Wednesday, January 25th, 2012
ಬಜಪೆಯಲ್ಲಿ ವಿದ್ಯಾರ್ಥಿಗಳ ಮೇಲಾಗಿರುವ ಹಲ್ಲೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜಪೆ ವಲಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
ವಿದ್ಯಾರ್ಥಿಗಳ ಮೇಲಾಗಿರುವ ಹಲ್ಲೆ ಇದು ಮೊದಲೇನಲ್ಲ. ಈ ಹಿಂದೆ ಮಹಿಳೆಯರನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದರುವುದನ್ನು ಪ್ರಶ್ನಿಸಿಸಲು ಹೋದ ಮಹಿಳಾ ಕಾರ್ಯಕರ್ತರ ಮೇಲೂ ಪೊಲೀಸರು ಪೂರ್ವಗ್ರಹ ಪೀಡಿತರಾಗಿ ವರ್ತಿಸಿದ್ದರು. ಏಕಮುಖವಾಗಿ ವರ್ತಿಸುತ್ತಿರುವ ಬಜಪೆ ಪೊಲೀಸರ ವಿರುದ್ಧವಾಗಿ ಶಿಸ್ತಿನ ಕ್ರಮ ಕೈಗೊಳ್ಳುವ ಮೂಲಕ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಂದು ಪಾಪ್ಯುಲರ್ ಫ್ರಂಟ್ ಬಜಪೆ ವಲಯಾಧ್ಯಕ್ಷ ಅಶ್ರಫ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
Syndicate content

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India