ಹಾಸನ: ಪಾಪ್ಯುಲ್ ಫ್ರಂಟ್ ನಿಂದ ಉಚಿತ ವೈದ್ಯಕೀಯ ಶಿಬಿರ

Monday, August 9th, 2010

ಹಾಸನ: ಡೆಂಗ್ಯೂ ಮತ್ತು ಚಿಕು್ಗುನ್ಯಾದಂತಹ ಮಾರಕ ರೋಗಗಳು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪಾಪ್ಯುಲ್ ಫ್ರಂಟ್ ಆ್ ಇಂಡಿಯಾವು ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಸಹಯೋಗದೊಂದಿಗೆ ಶನಿವಾರ ಅರಸೀಕೆರೆಯ ಮದೀನಾ ಶಾದಿ ಮಹಲ್ ನಲ್ಲಿ ಉಚಿತ ಆರೋಗ್ಯ ಶಿಬಿರವೊಂದನ್ನು ಆಯೋಜಿಸಿತ್ತು.

health camp in Hasan

ಸದಸ್ಯರ ವೈದ್ಯಕೀಯ ತಂಡವೊಂದು ಜನರ ಆರೋಗ್ಯ ತಪಾಸಿಸಿ ಔಷಧಿಗಳನ್ನು ವಿತರಿಸಿತು

. ಸಾವಿರಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಔಷಧಿಯನ್ನು ವಿತರಿಸಲಾಯಿತು. ಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ.ಹಬೀಬ್ ರಹ್ಮಾನ್ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಯಾವುದೆಲ್ಲಾ ಕ್ರಮ ಕೈಗೊಳ್ಳಬೇಕೆಂದು ವಿವರಿಸಿದರು. ಈ ಸಂದರ್ಭದಲ್ಲಿ ಅವರು ಪಾಪ್ಯುಲ್ ಫ್ರಂಟ್ ನ ಸೇವೆಯನ್ನು ಶ್ಲಾಘಿಸಿದರು.

Health Camp in Hasan

ಪಾಪ್ಯುಲ್ ಫ್ರಂಟ್ ಆ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮಾತನಾಡಿ ಪಾಪ್ಯುಲ್ ಫ್ರಂಟ್ ನಡೆಸುತ್ತಿರುವ ಸಮಾಜ ಸೇವೆಗಳ ಬಗ್ಗೆ ಪರಿಚಯಿಸಿದರು

. ಅಲ್ಲದೆ ಕುರಾನ್ ಮತ್ತು ಹದೀಸ್ ಗಳಲ್ಲಿ ವಿವರಿಸಲಾಗಿರುವ ವೈದ್ಯಕೀಯ ವಿಚಾರಗಳ ಬಗ್ಗೆ ತಿಳಿಸಿದರು.

Health Camp in Hasan

ಪಾಪ್ಯುಲ್ ಫ್ರಂ್ ಅರೆಸಿಕೆರೆ ತಾಲೂಕು ಘಟಕದ ಅಧ್ಯಕ್ಷ ಫರ್ವೀಜ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

. ಝಮೀ್ ಸ್ವಾಗತಿಸಿ, ಝಾಕಿ್ ವಂದಿಸಿದರು.

Health Camp in Hasan

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India