School Chalo 2012

ಮಾನವ ಹಕ್ಕುಗಳಿಗೆ ಪ್ರವಾದಿ ಪ್ರಾಮುಖ್ಯತೆ: ಅನ್ವರ್ ಸಾದಾತ್

Wednesday, February 22nd, 2012
Anwar Sadath
ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಫರಂಗಿಪೇಟೆ ವಲಯದ ವತಿಯಿಂದ ಫೆ.18ರಂದು ಫರಂಗಿಪೇಟೆ ಜಂಕ್ಷನ್‌ನಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಲ್ ಹಾದಿ ಯಹ್ಯಾ ತಂಂಗಳ್‌ರವರು ದುಆ ಆಶಿರ್ವಚನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಇನ್‌ಫಾರ್ಮೇಶನ್ ಆ್ಯಂಡ್ ಎಂಪವರ್‌ಮೆಂಟ್ ಸೆಂಟರ್‌ನ ಚೆಯರ್‌ಮ್ಯಾನ್ ಅನ್ವರ್ ಸಾದಾತ್, ಪ್ರವಾದಿ ಮುಹಮ್ಮದ್ (ಸ.ಅ)ರವರು 1400 ವರ್ಷಗಳ ಮುಂದೆಯೇ ಮಾನವ ಹಕ್ಕುಗಳ ರಕ್ಷಣೆಗಾಗಿ ಕರೆ ನೀಡಿದ್ದರು. ಮನುಷ್ಯನ ಪ್ರಾಣ, ಮಾನ ಹಾಗೂ ಸೊತ್ತಿಗೆ ಪ್ರಾಮುಖ್ಯತೆಯಿದೆ. ಅವುಗಳಿಗೆ ರಕ್ಷಣೆ ನೀಡಬೇಕೆಂದು ಪ್ರವಾದಿ (ಸ.ಅ)ರವರು ತನ್ನ ವಿದಾಯ ಭಾಷಣದಲ್ಲಿ ಕರೆಯಿತ್ತಿದ್ದರು ಎಂದು ಹೇಳಿದರು.
ಜಾಫರ್ ಸಾದಿಕ್ ಫೈಝಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಬಿಸಿರೋಡ್ ವಲಯಾಧ್ಯಕ್ಷ ಇಕ್ಬಾಲ್ ನಂದರಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಎ.ಎಂ, ಎಸ್‌ಡಿಪಿಐ ಪುದು ಸಮಿತಿ ಅಧ್ಯಕ್ಷ ಪುತ್ತು ಬಾವ, ಇಂಡಿಯಾ ಫ್ರೆಟರ್ನಿಟಿ ಫಾರಮ್ ಕುವೈಟ್ ಇದರ ಸದಸ್ಯ ಇಕ್ಬಾಲ್ ಬಡ್ಡೂರು ಮತ್ತು ನಝೀರ್ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಫಿ ಅಮ್ಮೆಮ್ಮಾರ್ ಸ್ವಾಗತಿಸಿ, ಸಲೀಕ್ ವಂದಿಸಿದರು ಮತ್ತು ಖಾದರ್ ಅಮ್ಮೆಮ್ಮಾರ್ ನಿರೂಪಿಸಿದರು.


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India