School Chalo 2012

ಬೆಂಗಳೂರು: ಎಸ್‌ಡಿಪಿಐಯಿಂದ ಸ್ನೇಹ ಸಮ್ಮಿಲನ

Wednesday, February 22nd, 2012
SDPI get together
ಬೆಂಗಳೂರು:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಫೆ.18ರಂದು ಇಲ್ಲಿನ ಬೆನ್‌ಸನ್ ಟೌನ್‌ನ ಆ್ಯಡಮ್ಸ್ ಗೋಲ್ಡನ್ ಹೆರಿಟೇಜ್‌ನಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಹ್ಮೂದ್ ಶರೀಫ್ ಆವಾದ್, ಎಸ್‌ಡಿಪಿಐ ಕೇವಲ ಎರಡೂವರೆ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಪಕ್ಷವಾಗಿದ್ದರೂ, ಕನ್ಯಾಕುಮಾರಿಯಿಂದ ದೂರದ ಮಣಿಪುರದವರೆಗೆ ಎಲ್ಲಾ ಮೂಲೆ ಮೂಲೆಗಳನ್ನು ತಲುಪಿದ್ದು, ಇದು ಪಕ್ಷವನ್ನು ಜನರು ಸ್ವೀಕರಿಸುತ್ತಿದ್ದಾರೆ ಎನ್ನುವುದಕ್ಕೆ ಪುರವಾಗಿದೆ ಎಂದರು.
ಪಕ್ಷವು ತಮಿಳುನಾಡಿನ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 300 ಸೀಟುಗಳಿಗೆ ಸ್ಪರ್ಧಿಸಿದ್ದು, 66 ಸೀಟುಗಳನ್ನು ಗೆದ್ದುಕೊಂಡಿದೆ.  ಜನರು ಪಕ್ಷದ ಉದ್ದೇಶ ಹಾಗೂ ವಾಸ್ತವವನ್ನು ಅರಿತಿರುವುದು ಇದರಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಹೇಮಲತಾ ಮಾತನಾಡಿ, ಎಸ್‌ಡಿಪಿಐ ಕೇವಲ ಮುಸ್ಲಿಮರಿಗಾಗಿ ಇರುವ ಪಕ್ಷವಲ್ಲ. ಅದು ದೇಶದ ಎಲ್ಲಾ ಪ್ರಜೆಗಳಿಗಾಗಿರುವ ಪಕ್ಷವಾಗಿದೆ. ದೇಶದಲ್ಲಿ ಮುಸ್ಲಿಮರು ಮಾತ್ರವಲ್ಲದೆ ಇತರ ಜಾತಿ, ಧರ್ಮೀಯರ ಮೇಲೂ ದೌರ್ಜನ್ಯ ನಡೆಯುತ್ತದೆ. ಇವರೆಲ್ಲರಿಗೂ ಪಕ್ಷವು ಅಭಯ ನೀಡುತ್ತದೆ ಎಂದರು.
ಸಾಕಿಬ್, ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ವಾಹಿದ್ ಸೇಠ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸೀಮ್ ಅಹ್ಮದ್ ಸ್ವಾಗತಿಸಿದರು.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India