School Chalo 2012

ಪಾವೂರು: ಎಸ್‌ಡಿಪಿಐಯಿಂದ ದಾರಿದೀಪ ವ್ಯವಸ್ಥೆ

Wednesday, February 22nd, 2012
ಪಾವೂರು: ಎಸ್‌ಡಿಪಿಐ ವತಿಯಿಂದ ಪಾವೂರು ಗ್ರಾಮ ಪಂಚಾಯತಿಗೊಳಪಟ್ಟ ಪ್ರದೇಶದಲ್ಲಿ ಹದಗೆಟ್ಟ ದಾರಿದೀಪಗಳನ್ನು ತೆರವುಗೊಳಿಸಿ ಹೊಸ ದೀಪಗಳ ವ್ಯವಸ್ಥೆ ಮಾಡಲಾಗಿದೆ.
ಇತ್ತೀಚೆಗೆ ಸುಮಾರು 30 ಸಾವಿರ ರೂಪಾಯಿ ಮೊತ್ತದ ಹೊಸ ದೀಪಗಳನ್ನು ಪಾವೂರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್‌ಡಿಪಿಐ ಸ್ಥಳೀಯ ನಾಯಕರಾದ ನಾಸೀರ್ ಮಲಾರ್ ಮತ್ತು ಹಾರಿಸ್ ಮಲಾರ್‌ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಷಾ ಮತ್ತು ಪಂಚಾಯತ್ ಅದ್ಯಕ್ಷಕಾದರ್ ಇನೋಳಿರವರಿಗೆ ಹಸ್ತಾತಂರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್‌ನ ಎಲ್ಲಾ ಸದಸ್ಯರು ಮತುತಿ ಎಸ್‌ಡಿಪಿಐ ನಾಯಕರಾದ ಹನೀಫ್ ಮಲಾರ್, ಐ.ಎಸ್ ಹನೀಫ್, ಶಮೀರ್ ಮಲಾರ್, ರಾಜೇಶ್ ಇನೋಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಎಸ್‌ಡಿಪಿಐಯ ಈ ಕೊಡುಗೆಯನ್ನು ಪಂಚಾಯತ್ ಅಧ್ಯಕ್ಷರು ಶ್ಲಾಘಿಸಿದರು.


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India