School Chalo 2012

ಐಎಫ್‌ಎಫ್‌ನ ಅಲ್-ಘಸಿಮ್ ಘಟಕದ ನೂತನ ಅಧ್ಯಕ್ಷರಾಗಿ ರವೂಫ್ ಕಲಾಯಿ ಆಯ್ಕೆ

Wednesday, January 25th, 2012
ಬುರೈದ: ಇಂಡಿಯಾ ಫ್ರೆಟರ್ನಿಟಿ ಫಾರಮ್‌ನ ಅಲ್-ಘಸಿಮ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು. ಘಟಕದ ನೂತನ ಅಧ್ಯಕ್ಷರಾಗಿ ಅಬ್ದುಲ್ ರವೂಫ್ ಕಲಾಯಿಯವರು ಆಯ್ಕೆಯಾಗಿದ್ದಾರೆ.
ನೌಶಾದ್ ಕೇರಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ವೇಳೆ, ಅಬ್ಬಾಸ್ ಅಲಿ ಪುತ್ತೂರು ಕಾರ್ಯದರ್ಶಿಯಾಗಿ, ರಝಾಕ್ ಕೇರಳ ಉಪ ಕಾರ್ಯದರ್ಶಿಯಾಗಿ ಮತ್ತು ಇಸ್‌ಹಾಕ್ ತಲಪಾಡಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಸುಲೈಮಾನ್ ಕೇರಳರವರು ಚುನಾವಣೆಯ ಉಸ್ತುವಾರಿಯನ್ನು ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರಶೀದ್ ಉಚ್ಚಿಲ ವಹಿಸಿದ್ದರು. ಖಾದರ್ ಸುರತ್ಕಲ್ ಕಾರ್ಯಕ್ರಮ ಸಂಯೋಜಕರಾಗಿದ್ದರು. ಕಾರ್ಯಕ್ರಮದಲ್ಲಿ ಅಲಿ ಮೌಲವಿ ಕೇರಳ ಹಾಜರಿದ್ದರು.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India