School Chalo 2012

ಇಸ್ರೇಲ್‌ನ ಕೈಗೊಂಬೆಯಾಗದಿರಿ: ಸರಕಾರಕ್ಕೆ ಪಾಪ್ಯುಲರ್ ಫ್ರಂಟ್

Tuesday, January 17th, 2012
ಇಸ್ರೇಲ್‌ನೊಂದಿಗೆ ಭಯೋತ್ಪಾದನಾ ವಿರೋಧಿ ಚಟುವಟಿಕೆ ಒಪ್ಪಂದಕ್ಕೆ ಸಹಿ ಹಾಕಿರುವ ಯುಪಿಎ ಸರಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸುತ್ತದೆ. ಜಾಗತಿಕವಾಗಿ ಭಯೋತ್ಪಾದನೆಯ ಪ್ರಮುಖ ಮುಖ ಇಸ್ರೇಲ್ ಆಗಿರುವುದರಿಂದ ಈ ಒಪ್ಪಂದವು ಕೇವಲ ತಮಾಷೆಯಷ್ಟೇ. ದುರದೃಷ್ಟಕರವೆಂದರೆ ನಮ್ಮ ಸರಕಾರವು ಅಮೆರಿಕ ಮತ್ತು ಅದರ ಮೈತ್ರಿಯಾಗಿರುವ ಇಸ್ರೇಲ್‌ನ ಆಕ್ರಮಣಕಾರಿ ನೀತಿಯನ್ನು ಜಾರಿಗೊಳಿಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಇಸ್ರೇಲಿ ರಾಯಭಾರವನ್ನು ತೆರೆಯುವ ಭಾರತ-ಇಸ್ರೇಲ್‌ನ ಜಂಟಿ ನಿರ್ಧಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬೆದರಿಕೆಯೆಂದು ಭಾವಿಸುತ್ತದೆ. ಇದು ಹಿಂದುತ್ವ ಫ್ಯಾಶಿಷ್ಟ್ ಸಂಘಟನೆಗಳಿಗೆ ಅಮುಖ್ಯವಾಗಿ ಅವರ ಹಿಡಿತದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ಇನ್ನೂ ನೆರವಾಗಲಿದೆ.
ಝಿಯೋನಿಸ್ಟ್ ಸಿದ್ಧಾಂತದ ರಾಜ್ಯವಾಗಿರುವ ಇಸ್ರೇಲ್ ಆಧುನಿಕ ಭಯೋತ್ಪಾದನೆಯ ನಿಜವಾದ ರೂಪವಾಗಿದೆ. ಇಡೀ ನಾಗರಿಕ ಜಗತ್ತಿಗೆ, ವಿಶೇಷವಾಗಿ ಕಳೆದ 6 ದಶಕಗಳಿಂದ ಝಿಯೋನಿಸ್ಟ್ ಭಯೋತ್ಪಾದನಾ ಜಾಲದಿಂದ ದೌರ್ಜನ್ಯಕ್ಕಳೊಪಡುತ್ತಿರುವ ಫೆಲೆಸ್ತೀನ್ ಜನತೆಗೆ ಇದು ತಿಳಿದಿರುವ ವಾಸ್ತವ ಸಂಗತಿಯಾಗಿದೆ.
ಇಸ್ರೇಲ್ ದಿಲ್ಲಿಯಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತು ಭಾರತ ಟೆಲ್ ಅವೀವ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು 1992ರಲ್ಲಿ ತೆರೆದಿದ್ದವು. ಸರಣಿ ಸ್ಫೋಟಗಳನ್ನೊಳಗೊಂಡಂತೆ ಎಲ್ಲಾ ಪ್ರಮುಖ ಭಯೋತ್ಪಾದನಾ ಚಟುವಟಿಕೆಗಳು ಭಾರತದಲ್ಲಿ ಆರಂಭವಾಗಿರುವುದು 1992ರ ನಂತರವಾಗಿದೆಯೆಂಬುದು ಇಲ್ಲಿ ಉಲ್ಲೇಖನೀಯ.
ಹಲವು ವರ್ಷಗಳಿಂದ ಭಾರತವು ಫೆಲೆಸ್ತೀನ್ ಪರ ನಿಲುವನ್ನು ಹೊಂದಿದೆ. ವಿಶ್ವ ಸಂಸ್ಥೆಯ ಭದ್ರತಾ ಸಭೆಯಲ್ಲಿ ಭಾರತ ತನ್ನ ಅವಧಿಯನ್ನು ಆರಂಭಿಸಿದಂದಿನಿಂದ ಅದು ಆಕ್ರಮಿತ ಫೆಲೆಸ್ತೀನ್ ಭೂ ಪ್ರದೇಶದಲ್ಲಿ ಇಸ್ರೇಲಿ ಚಟುವಟಿಕೆಗಳನ್ನು ವಿರೋಧಿಸುವ ನಿರ್ಣಯಳನ್ನು ಬೆಂಬಲಿಸಿದೆ. ‘ಇಂಗ್ಲೆಂಡ್ ಇಂಗ್ಲಿಷರಿಗಿದ್ದಂತೆ ಫೆಲೆಸ್ತೀನ್ ಫೆಲೆಸ್ತೀಯನ್ನರಿಗೆ’ ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಯನ್ನು ಆಧರಿಸಿ ಯುಪಿಎ ಸರಕಾರವು ಹಲವು ಬಾರಿ ಭಾರತದ ಸಾಂಪ್ರದಾಯಿಕ ನಿಲುವನ್ನು ಒತ್ತಿ ಹೇಳಿತ್ತು. ಭಾರತವು ವಿಭಜನೆಯನ್ನು ವಿರೋಧಿಸಿತ್ತು ಮತ್ತು ಯಹೂದಿಯರಿಗೆ ಹಾಗೂ ಫೆಲೆಸ್ತೀನಿಯನ್ನರಿಗೆ ಸಮಾನ ರಾಜಕೀಯ ಹಕ್ಕುಗಳೊಂದಿಗೆ ಪ್ರಜಾಪ್ರಭುತ್ವದಲ್ಲಿ ಪ್ರಸ್ತಾಪಿಸಲಾದ ಏಕ ರಾಜ್ಯ ಪರಿಹಾರವನ್ನು ಪ್ರಸ್ತಾಪಿಸಿತ್ತು. ನೆಹರೂರವರಿಂದ ಹಿಡಿದು ರಾಜೀವ್ ಗಾಂಧಿಯವರೆಗೆ ಇದು ನಮ್ಮ ನೀತಿಯಾಗಿತ್ತು.
ಸಂತ್ರಸ್ತ ಫೆಲೆಸ್ತೀನ್ ಜನತೆಯ ಪರ ಕಪಟ ಅಳು ಮತ್ತು  ಇಸ್ರೇಲನ್ನು ಅಪ್ಪಿಕೊಳ್ಳುವುದನ್ನು ನಿಲ್ಲಿಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಯುಪಿಎ ಸರಕಾರವನ್ನು ಒತ್ತಾಯಿಸುತ್ತದೆ.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India