ಅನಿವಾಸಿ ಮತದಾರ ಕಾಯ್ದೆ ಮತ್ತು ಜಾತಿವಾರು ಜನಗಣತಿಗೆ ಪಾಪ್ಯುಲರ್ ಫ್ರಂ್ ಸ್ವಾಗತ

Thursday, September 2nd, 2010

ಇತ್ತೀಚೆಗೆ ಸಂಸತ್ತಿನಲ್ಲಿ ಅನುಮೋದನೆಗೊಂಡ ಅನಿವಾಸಿ ಮತದಾರ ಕಾಯ್ದೆ ಮತ್ತು

2010ರ ಜನಗಣತಿಯಲ್ಲಿ ಜಾತಿವಾರು ಗಣತಿಯನ್ನು ಸೇರಿಸುವ ಕೇಂದ್ರ ಸರಕಾರದ ನಿರ್ಣಯವನ್ನು ಪಾಪ್ಯುಲರ್ ಫ್ರಂ್ ಆ್ ಇಂಡಿಯಾ ಸ್ವಾಗತಿಸುತ್ತದೆ.

ವಿದೇಶದಲ್ಲಿ ವಾಸ್ತವ್ಯವಿರುವ ಭಾರತೀಯ ನಾಗರಿಕರಿಗೆ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ದಾಖಲಿಸಲು ಈ ಕಾನೂನು ಅವಕಾಶವನ್ನು ಒದಗಿಸುತ್ತದೆ

. ಈ ಕಾಯ್ದೆಯು ಅನಿವಾಸಿ ಭಾರತೀಯರು ವಿದೇಶದಲ್ಲಿರುವಾಗ ಮತದಾನಕ್ಕೆ ಅವಕಾಶ ನೀಡದಿದ್ದರೂ ಅವರಿಗೆ ಇಂಟರ್ನೆಟ್ ಮೂಲಕ ಮತದಾನ ಮಾಡುವ ಅವಕಾಶವನ್ನು ಸದ್ಯದಲ್ಲೇ ನೆರವೇರಿಸಿ ಕೊಡಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಶ್ರೀ ವೀರಪ್ಪ ಮೊಯ್ಲಿಯವರ ಹೇಳಿಕೆಯು ಆಶಾದಾಯಕವಾಗಿದೆ. ಾತಿವಾರು ಜನಗಣತಿ ನಡೆಸುವ ಯುಪಿಎ ಸರಕಾರದ ನಿರ್ಧಾರವು ಸ್ವಾತಂತ್ರ್ಯೋತ್ತರ ಇಂಡಿಯಾದಲ್ಲಿ ತೆಗೆದ ಧೈರ್ಯಶಾಲಿ ನಿರ್ಧಾರವಾಗಿದೆ. ಅದು ದೇಶದ ಎಲ್ಲಾ ವರ್ಗಗಳ ಅಭಿವೃದ್ಧಿ ಮತ್ತು ಸಮಾನತೆಯನ್ನು ಕಾಯ್ದುಕೊಳ್ಳಲು ಒಂದು ಉಪಯುಕ್ತ ಮಾಹಿತಿಯಾಗಿ ಮೂಡಿ ಬರಲಿದೆ. ಈ ಜಾತಿವಾರು ಜನಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಮತ್ತು ಪೂರ್ಣ ಅರ್ಥದಲ್ಲಿ ನಡೆಸಲು ಕೇಂದ್ರ ಸರಕಾರವು 2011ರ ಸಂಪೂರ್ಣ ಮನೆವಾಳ್ತೆ ಸಮೀಕ್ಷೆ ಒಂದು ಭಾಗವಾಗಿ ಮಾಡಬೇಕು ಮತ್ತು ಪ್ರಸಕ್ತ ನಡೆಯುತ್ತಿರುವ ಜನಗಣತಿಯಲ್ಲಿ ಸೇರಿಸಬಾರದು ಎಂದು ಕೇಂದ್ರ ಸರಕಾರವನ್ನು ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಈ ಮೂಲಕ ಆಗ್ರಹಿಸುತ್ತದೆ.

ಕೆ.ಎಂ.ಷರೀಫ್

ಪ್ರಧಾನ ಕಾರ್ಯದರ್ಶಿ

ಪಾಪ್ಯುಲ್ ಫ್ರಂ್ ಆ್ ಇಂಡಿಯಾ


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India