Monday, January 30th, 2012
ಮಂಗಳೂರು: ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಜನರಲ್ ಅಸೆಂಬ್ಲಿಯು ಜನವರಿ 28,29 - 2012 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರು ಫ್ರೀಢಂ ಕಮ್ಯೂನಿಟಿ ಹಾಲ್ನಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆರವರ ಭಾಷಣದೊಂದಿಗೆ ವಾರ್ಷಿಕ ಸಭೆಯು ಆರಂಭವಾಯಿತು. ಜನರಲ್ ಅಸೆಂಬ್ಲಿಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1.ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ದೇಶದ ಭದ್ರತೆಗೆ ಸಂಚಕಾರ:
ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿಯನ್ನು ತೆರೆಯುವ ಕೇಂದ್ರ ಸರಕಾರದ ನಿರ್ಧಾರವು ದೇಶದಲ್ಲಿ ನೀತಿಯನ್ನು ರೂಪಿಸುವುದರಲ್ಲಿ ಹೆಚ್ಚುತ್ತಿರುವ ಝಿಯೋನಿಸ್ಟ್ ರಾಷ್ಟ್ರದ ಪ್ರಭಾವಕ್ಕೆ ಪುರಾವೆಯಾಗಿದೆ.